Registration for 41st Annual Convocation of Mangalore University

Instructions:
  • The 41st Annual Convocation of Mangalore University will be held on 15th March 2023 at Mangala Auditorium, Mangalagangotri at 11 am.
  • Online registration is mandatory for all those who are eligible and willing to participate in the convocation ceremony.
  • Please register here only if you are attending the convocation in person.
  • The online registration process will start on 9th March 11:00 AM and end on 13th March 2023 at 3:00 PM.
  • Only PhD degree holders and First rank holders/cash prize winners/gold medal winners will be awarded the degree certificate on stage.
  • All remaining registered candidates will be awarded the degree certificate next to the stage after the convocation ceremony.
  • The degree certificates of all other (not registered but eligible) students, whose fee payment details are submitted by the department/College, will be sent to the concerned department/college by the end of 2nd week of April, 2023.
  • You should inform the Registrar(Evaluation) office through mail(regevalmu@gmail.com) and WhatsApp message to 9739867279 on 14th March 2023, by 3pm, in case you have registered but are unable to attend the Convocation ceremony.
  • The candidates should be in the venue at least 2 hours before (i. e., at 9 am) the commencement of the convocation ceremony (11 am).
  • Candidates will have to come to the convocation wearing white dress as prescribed by the statutes without which candidates will not be allowed to go to the stage to receive the certificates.
  • Candidates should maintain the dignity of the convocation throughout the ceremony.
  • Depending on the time schedule of his excellency, the Chancellor of Mangalore University, the convocation ceremony may happen in two phases, you are requested to cooperate with the University in this regard.
  • You will not be allowed to attend the convocation ceremony without an entry pass which will be generated after completion of this registration process.
ಸೂಚನೆಗಳು:
  • ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವವು 15ನೇ ಮಾರ್ಚ್ 2023 ರಂದು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
  • ತಾವು ಖುದ್ದಾಗಿ ಘಟಿಕೋತ್ಸವಕ್ಕೆ ಹಾಜರಾಗುತ್ತಿದ್ದಲ್ಲಿ ಮಾತ್ರ ಆನ್‌ಲೈನ್ ನೋಂದಣಿ ಮಾಡಿ.
  • ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅರ್ಹರಿರುವ ಹಾಗು ಇಚ್ಛಿಸುವ ಎಲ್ಲರೂ ಆನ್‌ಲೈನ್ ನೋಂದಣಿ ಮಾಡುವುದು ಕಡ್ಡಾಯವಾಗಿದೆ.
  • ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಮಾರ್ಚ್ 13 ರಂದು ಮಧ್ಯಾಹ್ನ 3 ಗಂಟೆಗೆ ಕೊನೆಗೊಳ್ಳುತ್ತದೆ.
  • ಪಿಎಚ್‌ಡಿ ಪದವಿ ಪಡೆದವರು, ಪ್ರಥಮ ಶ್ರೇಣಿ (rank) ಪಡೆದವರು/ನಗದು ಬಹುಮಾನ ವಿಜೇತರು/ಚಿನ್ನದ ಪದಕ ವಿಜೇತರಿಗೆ ಮಾತ್ರ ಪದವಿ ಪ್ರಮಾಣ ಪತ್ರವನ್ನು ವೇದಿಕೆಯಲ್ಲಿ ನೀಡಲಾಗುತ್ತದೆ.
  • ಉಳಿದ ಎಲ್ಲಾ ನೋಂದಾಯಿತ ಅಭ್ಯರ್ಥಿಗಳಿಗೆ ಘಟಿಕೋತ್ಸವ ಸಮಾರಂಭದ ನಂತರ ವೇದಿಕೆಯ ಪಕ್ಕದಲ್ಲಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
  • ವಿಭಾಗ /ಕಾಲೇಜಿನಿಂದ ವಿವರಗಳನ್ನು ಸಲ್ಲಿಸಿದ ಎಲ್ಲಾ ಇತರ (ನೋಂದಾಯಿತವಲ್ಲದ ಆದರೆ ಅರ್ಹ) ವಿದ್ಯಾರ್ಥಿಗಳ ಪದವಿ ಪ್ರಮಾಣಪತ್ರಗಳನ್ನು ಏಪ್ರಿಲ್ ಎರಡನೇ ವಾರದೊಳಗೆ ಸಂಬಂಧಿಸಿದ ವಿಭಾಗ/ಕಾಲೇಜಿಗೆ ಕಳುಹಿಸಲಾಗುತ್ತದೆ.
  • ನೀವು ನೋಂದಣಿ ಮಾಡಿಕೊಂಡ ನಂತರ ಅನಿವಾರ್ಯ ಕಾರಣದಿಂದ ಘಟಿಕೋತ್ಸವ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ 14ನೇ ಮಾರ್ಚ್ 2023 ರಂದು ಮಧ್ಯಾಹ್ನ 3 ಗಂಟೆಯೊಳಗೆ ನೀವು ಕುಲಸಚಿವ (ಮೌಲ್ಯಮಾಪನ) ಕಚೇರಿಗೆ ಮೇಲ್ (regevalmu@gmail.com) ಮತ್ತು WhatsApp (9739867279) ಸಂದೇಶದ ಮೂಲಕ ತಿಳಿಸಬೇಕು.
  • ಅಭ್ಯರ್ಥಿಗಳು ಕನಿಷ್ಠ 2 ಗಂಟೆಗಳ ಮೊದಲು (ಬೆಳಿಗ್ಗೆ 9) ಘಟಿಕೋತ್ಸವ ಸಮಾರಂಭದ (ಬೆಳಿಗ್ಗೆ 11) ಸ್ಥಳದಲ್ಲಿರಬೇಕು.
  • ನಿಯಮಾವಳಿಗಳ ಪ್ರಕಾರ ಘಟಿಕೋತ್ಸವಕ್ಕೆ ಅಭ್ಯರ್ಥಿಗಳು ಬಿಳಿ ಉಡುಗೆಯನ್ನು ಧರಿಸಿ ಬರಬೇಕು, ಇಲ್ಲದಿದ್ದರೆ ಅಭ್ಯರ್ಥಿಗಳು ಪ್ರಮಾಣಪತ್ರಗಳನ್ನು ಸ್ವೀಕರಿಸಲು ವೇದಿಕೆಗೆ ಹೋಗಲು ಅನುಮತಿಸಲಾಗುವುದಿಲ್ಲ.
  • ಸಮಾರಂಭದಲ್ಲಿ ಅಭ್ಯರ್ಥಿಗಳು ಘಟಿಕೋತ್ಸವದ ಘನತೆಯನ್ನು ಕಾಪಾಡಿಕೊಳ್ಳಬೇಕು.
  • ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಾಧಿಪತಿಗಳ ಸಮಯದ ವೇಳಾಪಟ್ಟಿಯನ್ನು ಅವಲಂಬಿಸಿ ಸಮಾರಂಭವು ಎರಡು ಹಂತಗಳಲ್ಲಿ ನಡೆಯಬಹುದು, ಈ ನಿಟ್ಟಿನಲ್ಲಿ ತಾವು ವಿಶ್ವವಿದ್ಯಾಲಯದೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.
  • ನೋಂದಣಿ ಪೂರ್ಣಗೊಂಡ ನಂತರ ದೊರಕುವ ಪ್ರವೇಶ ಪಾಸ್ (entry pass) ಇಲ್ಲದೆ ಘಟಿಕೋತ್ಸವ ಸಮಾರಂಭಕ್ಕೆ ಪ್ರವೇಶವಿರುವುದಿಲ್ಲ.
Registration Closed on 13/03/2023 at 03:00PM